GOOD NEWS :One more train to GGVT from Tomorrow this time looks like GGVT-UBL-GGVT express ಆತ್ಮೀಯ ಗಂಗಾವತಿ ತಾಲೂಕು ಬಂಧುಗಳೇ .,
ನಾಳೆ ದಿನಾಂಕ 3/6/2019 ರಂದು ಸಂಜೆ 4 ಗಂಟೆಗೆ ಗಂಗಾವತಿಯ ರೈಲು ನಿಲ್ದಾಣದ ಹುಬ್ಬಳ್ಳಿ ರೈಲಿನ ನೂತನ ಪರಿಷ್ಕೃತ ಸಮಯದ ಹೊಸ ರೈಲಿನ ಪೂಜೆ ನೆರವೇರಿಸಲು ಮಾನ್ಯ ಸಂಸದರಾದ ಶ್ರೀ ಸಂಗಣ್ಣ ಕರಡಿಯವರು ಆಗಮಿಸಲಿದ್ದಾರೆ . ಅದ್ದರಿಂದ ಎಲ್ಲರೂ ಸಮಯಕ್ಕೆ ಸರಿಯಾಗಿ ಹಾಜರಿರಬೇಕಾಗಿ ವಿನಂತಿ.
ರೈಲಿನ ಸಮಯ ಗಂಗಾವತಿಯಿಂದ ಬೆಳಿಗ್ಗೆ 05.00 ರಿಂದ 05.30 ಗಂಟೆಗೆ ಹೊರಟು 09-00 ರಿಂದ 09.30 ಗಂಟೆ ಹುಬ್ಬಳ್ಳಿ ನಗರಕ್ಕೆ ತಲುಪುವುದು ಮತ್ತು ಹುಬ್ಬಳ್ಳಿ ನಗರದಿಂದ ಬೆಳಗ್ಗೆ 10.00 ಗಂಟೆಗೆ ಹೊರಟು ಗಂಗಾವತಿ ನಗರಕ್ಕೆ 01.30 ಗಂಟೆಗೆ ತಲುಪುತ್ತದೆ ಮತ್ತು ಮಧ್ಯಾಹ್ನ 02.30 ಗಂಟೆಗೆ ಗಂಗಾವತಿಯಿಂದ ಹೊರಟು ಸಂಜೆ 06.30 ಗಂಟೆಗೆ ತಲುಪುತ್ತದೆ ಮತ್ತು ಹುಬ್ಬಳ್ಳಿಯಿಂದ...
more... ಸಂಜೆ 07.00 ಅಥವಾ 07.30 ಗಂಟೆಗೆ ಹೊರಟು ರಾತ್ರಿ 10.00 ಅಥವಾ 10.30ಕ್ಕೆ ಗಂಗಾವತಿ ನಗರಕ್ಕೆ ತಲುಪಬಹುದು ಎಂದು ಸಂಭಾವನೆ ಇದೆ .. (ದಿನಾಂಕ 3.6.2019 ರಂದು ಮಾನ್ಯ ಸಂಸದರು ಹಾಗೂ ರೈಲ್ವೆ ಅಧಿಕಾರಿಗಳ ಕಡೆಯಿಂದ ಸಮಯದ ಅಂತಿಮ ಪಟ್ಟಿ ಬಿಡುಗಡೆ ಆಗಬಹುದು )
*ಕೊನೆಯದಾಗಿ ಒಂದು ಮನವಿ ಮಾನ್ಯ ಸಂಸದರು ಗಂಗಾವತಿ ನಗರದಿಂದ ನೂತನ ರೈಲ್ವೆ ನಿಲ್ದಾಣಕ್ಕೆ ರೈಲಿನ ಸರಿಯಾದ ಸಮಯಕ್ಕೆ ಸಿಟಿ ಬಸ್ಸುಗಳನ್ನು ಬಿಡಸಬೇಕಾಗಿ ವಿನಂತಿ. ಯಾಕಂದ್ರೆ ಈಗಾಗಲೇ ಗಂಗಾವತಿ ನಗರದಿಂದ ರೈಲ್ವೆ ನಿಲ್ದಾಣಕ್ಕೆ ಹೋಗಕ್ಕೆ ಆಟೊದವರು ಹೆಚ್ಚಿನ ಹಣವನ್ನು ಪಡೆಯುತ್ತಿದ್ದು ಇದರಿಂದ ಜನಗಳಿಗೆ ಬಹಳ ವರೆ ಆಗುತ್ತಿದೆ. ಮಾನ್ಯ ಸಂಸದರು ರೈಲ್ವೆ ನಿಲ್ದಾಣಕ್ಕೆ ಕೂಡಲೇ ಸಿಟಿ ಬಸ್ಸುಗಳ ಓಡಿಸುವ ವ್ಯವಸ್ಥೆ ಮಾಡಿಸಬೇಕಾಗಿ ಗಂಗಾವತಿ ನಾಗರಿಕರ ಪರವಾಗಿ ವಿನಂತಿ ... source: FB,Kannada prabha newspaper ,RB website